6ನೇ ಜನವರಿ ಪ್ರಚಲಿತ ಘಟನೆಗಳು
ರಾಷ್ಟ್ರೀಯ
1. ವರ್ಟಿಕಲ್ ಫಾರ್ಮಿಂಗ್:
- ನಗರೀಕರಣದ ಫಲವಾಗಿ ದೇಶದಲ್ಲಿ ಬೇಸಾಯ ಭೂಮಿ ಸಂಕುಚಿತಗೊಳ್ಳುತ್ತಿದೆ. ಕೃಷಿಭೂಮಿ ಕ್ಷೀಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಆಹಾರ ಉತ್ಪಾದನೆ ಸಮಸ್ಯೆ ಎದುರಾಗಿದೆ. ಇದಕ್ಕೆ ಹೊಸ ಪರಿಹಾರವಾಗಿ ‘ವರ್ಟಿಕಲ್ ಫಾರ್ಮಿಂಗ್' ಎಂಬ ಪದ್ದತಿ ಇತ್ತೀಚೆಗೆ ಜನಪ್ರಿಯವಾಗುತ್ತಿದೆ.
- ಹಸಿರುಮನೆಗಳ ನಿಯಂತ್ರಿತ ವಾತಾವರಣದಲ್ಲಿ ಖನಿಜಪೂರಿತ ನೀರನ್ನು ಬಳಸಿ ಲಂಬ ರೀತಿಯಲ್ಲಿ ಕೃಷಿ ಬೆಳೆಗಳನ್ನು ಬೆಳೆಯುವ ಪದ್ಧತಿಗೆ ವರ್ಟಿಕಲ್ ಫಾರ್ಮಿಂಗ್ ಎಂದು ಕರೆಯಲಾಗುತ್ತದೆ.
- ಭಾರತ ಸೇರಿದಂತೆ ಜಗತ್ತಿನ ಹಲವೆಡೆ ಈ ತಂತ್ರಜ್ಞಾನ ಇತ್ತೀಚೆಗೆ ಜನಪ್ರಿಯವಾಗುತ್ತಿದೆ. ಸಾಮಾನ್ಯ ಕೃಷಿ ಪದ್ಧತಿಯಲ್ಲಿ ಬಳಸಲಾಗುವ ನೀರಿನ ಪ್ರಮಾಣವನ್ನೇ ವರ್ಟಿಕಲ್ ಫಾರ್ಮಿಂಗ್‌ನಲ್ಲೂ ಬಳಸಲಾಗುತ್ತದೆ.
- ವಿಶ್ವಸಂಸ್ಥೆಯ ಎಫ್‌ಎಒ ( ಆಹಾರ ಮತ್ತು ಕೃಷಿ ಸಂಘಟನೆ) ಪ್ರಕಾರ, ಸಾಂಪ್ರದಾಯಿಕ ಕೃಷಿಗೆ ಹೋಲಿಸಿದರೆ ಲಂಬ ಕೃಷಿಯು ಶೇ. 75ರಷ್ಟು ಕಡಿಮೆ ಕಚ್ಚಾವಸ್ತುಗಳನ್ನು ಬೇಡುತ್ತದೆ.
- ಸಾಂಪ್ರದಾಯಿಕ ಕೃಷಿಯಲ್ಲಿ 72 ಚದರ ಮೀಟರ್ ಭೂ ಜಾಗದಲ್ಲಿ ಉತ್ಪಾದಿಸುವ ಆಹಾರ ಪ್ರಮಾಣವನ್ನು ವರ್ಟಿಕಲ್ ಫಾರ್ಮಿಂಗ್‌ನಲ್ಲಿ 6 ಚದರ ಮೀಟರ್ ಪ್ರದೇಶದಲ್ಲಿ ಬೆಳೆಯಬಹುದಾಗಿದೆ.
- ವರ್ಟಿಕಲ್ ಫಾರ್ಮಿಂಗನಲ್ಲಿ ಸಸ್ಯಗಳನ್ನು ಒಳಾಂಗಣದಲ್ಲಿ ಮಣ್ಣಿನೊಂದಿಗೆ ಅಥವಾ ಮಣ್ಣಿಲ್ಲದೆಯೂ ಬೆಳೆಯಬಹುದಾಗಿದೆ. ಇದು ನಿರಂತರ ಮಳೆ, ಶುಷ್ಕ ವಾತಾವರಣದಿಂದ ಬೆಳೆಯನ್ನು ರಕ್ಷಿಸುತ್ತದೆ.
- ಈ ಪದ್ಧತಿ ನಗರ ಪ್ರದೇಶಗಳಿಗೆ ಹೆಚ್ಚು ಸೂಕ್ತವಾಗಿದೆ. ವರ್ಟಿಕಲ್ ಫಾರ್ಮಿಂಗ್, ಹೈಡೋಫೋನಿಕ್ಸ್ ಮತ್ತು ಏರೋಪೋನಿಕ್ಸ್ ಎಂಬ ಎರಡು ಪ್ರಮುಖ ಕೃಷಿ ತಂತ್ರಗಳನ್ನು ಅಳವಡಿಸಿಕೊಂಡಿದ್ದು, ಸಾಂಪ್ರದಾಯಿಕ ಕೃಷಿಗಿಂತ ಇದರಲ್ಲಿ ಇಳುವರಿ ಹೆಚ್ಚಿರುತ್ತದೆ.
- ಹೈಡ್ರೋಪೋನಿಕ್ಸ್ ತಂತ್ರಜ್ಞಾನದಲ್ಲಿ ಪೋಷಕಾಂಶಗಳಿಂದ ತುಂಬಿದ ಬೇರುಗಳು ನೀರಿನಲ್ಲಿ ಮುಳುಗಿರುತ್ತವೆ. ತಂತ್ರಜ್ಞಾನದಲ್ಲಿ ಸಸ್ಯಗಳನ್ನು ಮುಚ್ಚಿದ ಅಥವಾ ಅರೆ-ಮುಚ್ಚಿದ ವಾತಾವರಣದಲ್ಲಿ ಪೋಷಕಾಂಶಗಳನ್ನು ಗಾಳಿಯಲ್ಲಿ ಸಿಂಪಡಿಸಲಾಗುತ್ತದೆ.
- ವಿಶ್ವದ ಐದು ಅತಿದೊಡ್ಡ ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿ ಕೃಷಿ ಮತ್ತು ಸಾರಿಗೆ ಸೇರಿದೆ ಎಂದು ವಿಶ್ವಸಂಸ್ಥೆಯ ಪರಿಸರ ಕಾಠ್ಯಕ್ರಮದ (ಯುಎನ್‌ಇಪಿ) ಎಮಿಷನ್ ಗ್ಯಾಪ್ ರಿಪೋಟ್ 2019 ತಿಳಿಸಿದೆ.
- ಮತ್ತೊಂದೆಡೆ ವರ್ಟಿಕಲ್ ಫಾರ್ಮಿಂಗ್ ನ ಕಾರ್ಬನ್ ಪ್ರಿಂಟ್ ತುಂಬಾ ಕಡಿಮೆ ಪ್ರಮಾಣದಲ್ಲದೆ ಎಂದು ವರದಿ ಹೇಳಿದೆ.
- ಭಾರತದಲ್ಲಿ 2019ರಲ್ಲಿ ವರ್ಟಿಕಲ್ ಫಾರ್ಮಿಂಗ್ ಪದ್ದತಿಯನ್ನು ಪರಿಚಯಿಸಲಾಯಿತು. ಅದರೆ ಅದನ್ನು ಮಾರುಕಟ್ಟೆಗೆ ಪರಿಚಯಿಸುವ ಬಗ್ಗೆ ಇನ್ನೂ ಕೆಲಸಗಳು ನಡೆಯುತ್ತಿವೆ. ಅಮೆರಿಕ ಸೇರಿದಂತೆ ಕೆಲವು ದೇಶಗಳಲ್ಲಿ ವರ್ಟಿಕಲ್ ಫಾರ್ಮಿಂಗ್ ಪದ್ದತಿ ಹೆಚ್ಚು ಜನಪ್ರಿಯವಾಗಿದೆ.
ಅಂತರ-ರಾಷ್ಟ್ರೀಯ
1. ಬಾಂಗ್ಲಾದೇಶದ ಮೊದಲ ಹಿಂದೂ ಜಡ್ಜ್ ಬಂಧನಕ್ಕೆ ಆದೇಶ:
- ಸುಮಾರು 3 ಕೋಟಿ ರೂ. ಲಂಚ ಪಡೆದ ಆರೋಪದ ಮೇರೆಗೆ ಬಾಂಗ್ಲಾದೇಶದ ಮೊದಲ ಹಿಂದೂ ಮುಖ್ಯ ನ್ಯಾಯಮೂರ್ತಿ ಎಂಬ ಹಿರಿಮೆ ಹೊಂದಿದ್ದ ನ್ಯಾ. ಸುರೇಂದ್ರ ಕುಮಾರ್ ಸಿನ್ಹಾ ವಿರುದ್ಧ ವಿಶೇಷ ನ್ಯಾಯಾಲಯ ಬಂಧನ ವಾರಂಟ್ ಜಾರಿ ಮಾಡಿದೆ.

- ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ಒಂದೇ ಪ್ರಯಾಣದಲ್ಲಿ ದೀರ್ಘಾವಧಿ ಕಳೆದ ಮಹಿಳಾ ಗಗನಯಾನಿ ಎಂಬ ಕೀರ್ತಿಗೆ ನಾಸಾದ ಗಗನಯಾತ್ರಿ ಕ್ರಿಸ್ಟಿನಾ ಕೋಚ್ ಪಾತ್ರರಾಗಿದ್ದಾರೆ.

- ಬಣ್ಣ ಬೃಹತ್ ದಳ, ದಳಗಳ ಮೇಲೆ ಬಿಳಿ ಬಿಳಿಯ ಗುಳ್ಳೆಯ ರೀತಿಯ ಚುಕ್ಕಿಗಳು ನೋಡಿದ ತಕ್ಷಣ ಸೆಳೆಯುವ ನೋಟ ಇಂತಹ ಸುಂದರ ಹೂವು ಈಗ ಇಂಡೋನೇಷ್ಯಾದ ಕಾಡಿನಲ್ಲಿ ಅರಳಿದೆ.
ಹೇಗೆನ್ನುತ್ತಾರೆ ಇರಾನ್‌ನಲ್ಲಿ!
- ಹಲೋ ಎನ್ನುವುದನ್ನು ಸಲಾಂ ಎನ್ನುತ್ತಾರೆ.
- ಪ್ಲಸ್ ಎನ್ನುವುದಕ್ಕೆ ಲೊಫನ್ ಎನ್ನುತ್ತಾರೆ.
- ಥ್ಯಾಂಕ್ಯೂ ಎನ್ನುವುದಕ್ಕೆ ತಾಷಕೊರ್ ಎನ್ನುತ್ತಾರೆ.
- ಯೆಸ್‌ಗೆ ಬಾಲೆ ಎಂದು ನೋ ಗೆ 'ನಾ' ಎಂದು ಕರೆಯುತ್ತಾರೆ.
- ಶೈರಿನ್ ಎಬಾಡಿ: ನೊಬೆಲ್ ಪ್ರಶಸ್ತಿ ಪಡೆದವರು
- ರೆಝಾ ಅಬ್ಬಾಸಿ: 1565-1935ರ ಕಾಲದ ಇವರು ಅಲ್ಲಿನ ಪ್ರಮುಖ ಚಿತ್ರಕಲಾವಿದ ಮತ್ತು ಕ್ಯಾಲಿಗ್ರಫರ್.
- ಏಷ್ಯಾಟಿಕ್ ಚೀತಾಗಳು (ಅಳಿವಿನಂಚಿನಲ್ಲಿವೆ)
- ಒಂಟೆಗಳು, ಪರ್ಷಿಯನ್ ಚಿರತೆಗಳು
- ಓಕ್ಸುಸ್ ಹಾವುಗಳು
- ಕ್ಯಾಸ್ಪಿಯನ್ ಸೀಲ್ (ನೀರುನಾಯಿ)
- ಒಂದು ಕಾಲದಲ್ಲಿ ಇಲ್ಲಿ ಸಿಂಹಗಳು, ಹುಲಿಗಳು ಮತ್ತು ಇತರೆ ಬೃಹತ್ ಪ್ರಾಣಿಗಳು ಇದ್ದವು. ಆದರೆ, ಬೇಟೆಯಿಂದಾಗಿ ಇವು ಅಪರೂಪವಾಗಿ ಬಿಟ್ಟಿವೆ.
- ಇರಾನ್ ಏದ್ಯಾ ಖಂಡದ ಒಂದು ದೇಶ. 1935ರ ಮೊದಲು
- ವಿಶಾಲವಾದ ಮರುಭೂಮಿಗಳು, ಉಪ್ಪು ಹೊಂದಿರುವ ಪ್ರದೇಶಗಳು, ಮಳೆಕಾಡುಗಳನ್ನು ಹೊಂದಿದೆ. ಅತ್ಯಧಿಕ ಪರ್ವತಗಳನ್ನು ಹೊಂದಿರುವ ವಿಶ್ವದ ಕೆಲವು ರಾಷ್ಟ್ರಗಳಲ್ಲಿ ಇದು ಪ್ರಮುಖವಾಗಿದೆ.
- ಜಗತ್ತಿನ ಪ್ರಮುಖ ಪುರಾತನ ದೇಶ. ಈ ದೇಶದ ಮೊದಲ ನಗರ ಸುಸಾವನ್ನು ಕ್ರಿ.ಪೂ. 3200ರಲ್ಲಿಯೇ ನಿರ್ಮಿಸಲಾಗಿತ್ತು.
- ಕ್ರಿ.ಪೂ. 559ರಲ್ಲಿ ಪರ್ಷಿಯಾದ ಸಾಮ್ರಾಜ್ಯವು ಇರಾನ್ ಮಾತ್ರವಲ್ಲದೆ ಮೆಸಪೊಟಮಿಯಾ, ಈಜಿಪ್ಟ್, ಮೆಡಿಟೇರಿಯನ್ ಸಾಗರದವರೆಗೂ ವ್ಯಾಪಿಸಿತ್ತು. ಜಗತ್ತಿನ ಪುರಾತನ ಸಾಮಾಜ್ಯಗಳಲ್ಲಿ ಇದು ಪ್ರಮುಖವಾಗಿದೆ.
- ರಾಜಧಾನಿ – ತೆಹ್ರಾನ್
- ಪ್ರಮುಖ ನಗರ: ಮಷಾಹದ್, ಈಸಫಾನ್
- ಕರೆನಿ: ರಿಯಲ್ (ಐಆರ್‌ಆರ್)
- ಆಡಳಿತ ಭಾಷೆ :ಪರ್ಷಿಯನ್ (ಪಾರ್ಸಿ)
- ಪ್ರಮುಖ ಧರ್ಮ: ಇಸ್ಲಾಂ
ಆರ್ಥಿಕ
1. ರಾಜ್ಯಕ್ಕೆ ತೆರಿಗೆ ತಾಪತ್ರಯ:
- ರಾಜ್ಯ ಸರ್ಕಾರ ವಿವಿಧ ಮೂಲಗಳಿಂದ ಸಂಗ್ರಹಿಸುವ ತೆರಿಗೆಗಳಲ್ಲಿ ವರ್ಷಾಂತ್ಯಕ್ಕೆ 2000 ಕೋಟಿ ರೂ. ಗಳ ತನಕ ಕೊರತೆ ಸಂಭವಿಸಬಹುದೆಂದು ಹಣಕಾಸು ಇಲಾಖೆ ಅಂದಾಜು ಮಾಡಿದೆ.
- ಸರ್ಕಾರ ಸ್ವಂತ ತೆರಿಗೆಗಳಿಂದ 1,01,744 ಕೋಟಿ ರೂ. ಸಂಗ್ರಹಣೆ ಉದ್ದೇಶ ಹೊಂದಿದ್ದು, ಈವರೆಗೆ 57,740 ಕೋಟಿರೂ. ಸಂಗ್ರಹವಾಗಿದೆ.
- ಈ ಅಂದಾಜಿನಲ್ಲಿ ಲೆಕ್ಕಹಾಕಿ ದಾಗ 2000 ಕೋಟಿ ರೂ. ಕಡಿಮೆಯಾಗ ಬಹುದೆಂಬುದು ಆರ್ಥಿಕ ಇಲಾಖೆ ಮಾಡುತ್ತಿರುವ ಅಂದಾಜು. ತೆರಿಗೆ ಸಂಗ್ರಹಣೆಯ ಬೆಳವಣಿಗೆಯ ಪ್ರಮಾಣ ಶೇ. 5.2ಕ್ಕಿಂತ ಹೆಚ್ಚಾಗುತ್ತಿಲ್ಲ.
- ಕೇಂದ್ರ ಸರ್ಕಾರ ನೀಡಬೇಕಾಗಿರುವ ತೆರಿಗೆ ಪಾಲಿನಲ್ಲಿ ಎಷ್ಟು ಕಡಿತ ಆಗಲಿದೆ ಎಂಬ ಅಂದಾಜು ರಾಜ್ಯ ಸರ್ಕಾರಕ್ಕೆ ಸಿಗುತ್ತಿಲ್ಲ.
- ಲಭ್ಯ ಮಾಹಿತಿಯ ಪ್ರಕಾರ 5 ಸಾವಿರ ಕೋಟಿ ರೂ.ಗಳ ತನಕ ಕಡಿಮೆಯಾಗಬಹುದೆಂದು ಹೇಳಲಾಗುತ್ತಿದೆ.
- ಈಗ ಜಿಎಸ್‌ಟಿ ಪರಿಹಾರದ ಎರಡು ಕಂತು 7000 ಕೋಟಿ ರೂ. ಬಾಕಿ ಇದೆ. ಆದರೆ ಕೇಂದ್ರ ಸರ್ಕಾರ ಮಾತ್ರ ಇದುವರೆವಿಗೂ ಆ ಬಗ್ಗೆ ಏನೇನು ಮಾಹಿತಿ ಇಲಾಖೆಗಳಿಗೆ ನೀಡಿಲ್ಲ ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಯಾವ ತೆರಿಗೆ | ಗುರಿ | ಆಗಬೇಕಾಗಿದ್ದು | ಆಗಿರುವುದು |
ಒಟ್ಟಾರೆ ಸ್ವಂತ ಸಂಪನ್ಮೂಲ | 1.01.744 | 59350 | 57740 |
ವಾಣಿಜ್ಯ ತೆರಿಗೆ | 58797 | 34290 | 34165 |
ಅಬಕಾರಿ ತೆರಿಗೆ | 20950 | 12220 | 12631 |
ಮೋಟಾರ್ ವಾಹನ ತೆರಿಗೆ | 7100 | 4141 | 3472 |
ನೋಂದಣಿ ಮುದ್ರಾಂಕ ತೆರಿಗೆ | 11828 | 6899 | 6345 |
ಕ್ರೀಡೆ
1. ಅಲೌಂಡರ್ ಇರ್ಫಾನ್ ಪಠಾಣ್ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ:

0 Comments