ಈ ಹಾಡಿನ ರೀಧಿಗಾಗಿ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ

ಜಗದೊಡೆನೆಯನ ಧರ್ಮವ ಸಾರುತ ಬಂದಿಹರು ನೆಬಿಯವರು
ಜಗಕ್ಕೆಲ್ಲಾ ಶಾಂತಿಯ ನೀತಿಯ ಧರ್ಮವ ಸಾರಿದರೂ (2)

ಏಳು ಲೋಕದ ಸೃಷ್ಟಿಗೆ ಕಾರಣ ತ್ವಾಹ ನೆಬಿ ತ್ವಾಹ ನೆಬಿ
ಏಳು ಬಣ್ಣದ ವರ್ಣನೆಗೊಡಯರು ತ್ವಾಹ ನೆಬಿ ತ್ವಾಹ ನೆಬಿ(2)
ಅಲ್ ಅಮೀನೆಂಬ ಬಿರುದ ಪಡೆದು  ಮೆರೆದಿಹರು ನಮ್ಮ ನೆಬಿ
ಜಗಕ್ಕೆಲ್ಲಾ ಶಾಂತಿಯ ನೀತಿಯ ಧರ್ಮವ ಸಾರಿದರೂ (೨)
( ಜಗದೊಡೆನೆಯನ  )

ಪೂರ್ಣ ಚಂದ್ರ ಪ್ರಕಾಶ ಶೋಭಿತ ತ್ವಾಹ ನೆಬಿ ತ್ವಾಹ ನೆಬಿ (2)
ಲೋಕವಿಮೋಚಕ ನಾಯಕರವರು ತ್ವಾಹ ನೆಬಿ ತ್ವಾಹ ನೆಬಿ(2)
ನಲ್ಮನ  ಹೃದಯದ ಪ್ರೀತಿಯ ಅರಮನೆ ಮುಸ್ತಫಾ ಸ್ವಲ್ಲಲ್ಲಾಹ್
ಜಗಕ್ಕೆಲ್ಲಾ ಶಾಂತಿಯ ನೀತಿಯ ಧರ್ಮವ ಸಾರಿದರೂ (2)
( ಜಗದೊಡೆನೆಯನ  )