ಸುತ್ತಲು ನೋಡಿ ಪುಟಾಣಿಗಳೇ
ಕಣ್ಣಿಗೆ ಕಾಣುವುದೇನೆಲ್ಲ?
ಕಲ್ಲುಗಳು ಮರ ಬಳ್ಳಿಗಲು
ಗುಡ್ಡೆಗಳು  ನದಿ ಕಾಡುಗಳು
ಇದೆಲ್ಲವ ಸೃಷ್ಟಿಸಿದ್ದಾರೆಂದು?
ಸರ್ವಶಕ್ತನು  ಅಲ್ಲಾಹು
ಮರದಲಿ ಬೆಳೆವ ಹಣ್ಣುಗಳು
ಗಿಡದಲಿ ಅರಳುವ ಕುಸುಮಗಳು
ಧರೆಯಲಿ ಹರಿಯುವ ಜಲಧಾರೆಗಳು
ಬಾನಲಿ ಮಿನುಗುವ ತಾರೆಗಳು
ಇದೆಲ್ಲವ ಸೃಷ್ಟಿಸಿದ್ದಾರೆಂದು?
ಸರ್ವಶಕ್ತನೂ ಅಲ್ಲಾಹು