1ನೇ ಜನವರಿ ಪ್ರಚಲಿತ ಘಟನೆಗಳು
ರಾಜ್ಯ
1. ಅಧೀನ ಕೋರ್ಟ್‌ಗಳ ಕಾರ್ಯಾವದಿ ಬದಲು:

- ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲೂಕು ನ್ಯಾಯಾಲಯಗಳ ಕೆಲಸದ ಅವಧಿಯನ್ನು ಬದಲಿಸಿ ಅಧಿಸೂಚನೆ ಹೊರಡಿಸಲಾಗಿದೆ.
- ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬದಾಮಿಕರ್ ಈ ಕುರಿತು ಆದೇಶ ಹೊರಡಿಸಿದ್ದು, ರಾಜ್ಯದ ಜಿಲ್ಲಾ ಹಾಗೂ ತಾಲೂಕು ಕೋರ್ಟ್‌ಗಳಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 2ರವರೆಗೆ ಮೊದಲ ಕಲಾಪ ಹಾಗೂ ಮಧ್ಯಾಹ್ನ 2.45ರಿಂದ ಸಂಜೆ 5.45ರವರೆಗೆ ಎರಡನೇ ಕಲಾಪ ನಡೆಯಲಿದ್ದು, ಮಧ್ಯಾಹ್ನ 2ರಿಂದ 2.45ರವರೆಗೆ ಭೋಜನ ವಿರಾಮವಿರಲಿದೆ.
- ಬೆಳಗ್ಗೆ 10ರಿಂದ 5 ಸಂಜೆ 6ಗಂಟೆಯ ವರೆಗೆ ಕಚೇರಿಯ ಅವಧಿ ಇರಲಿದೆ ಎಂದು ಗ ದೇಶದಲ್ಲಿ ತಿಳಿಸಲಾಗಿದೆ.

- ಕುವೆಂಪು ಕಲಾನಿಕೇತನ ನೀಡುವ ಪ್ರಸಕ್ತ ಸಾಲಿನ 'ರಾಷ್ಟ್ರಕವಿ ಕುವೆಂಪು ಪ್ರಶಸ್ತಿ'ಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ರಾಷ್ಟ್ರೀಯ
1. ಕಾಡ್ಗಿಚ್ಚು ತಡೆಗೆ ಉಪಗ್ರಹ, ಡ್ರೋನ್:

- ಬಂಡೀಪುರಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದ ವಲಯ, ಕುಂದಕರೆ ವಲಯ ಹಾಗೂ ಕೊಡಗು, ಮಡಿಕೇರಿ, ಚಾಮರಾಜನಗರ, ಮಲೆಮಹದೇಶ್ವರ ಬೆಟ್ಟ ಸೇರಿ ರಾಜ್ಯದ ವಿವಿಧ ಅರಣ್ಯಗಳಲ್ಲಿ ಕಾಡ್ಗಚ್ಚು ತಡೆಗಟ್ಟಲು 10 ರಿಂದ 12 ಡ್ರೋನ್ ಕ್ಯಾಮರಾ ಬಳಸಲು ಅರಣ್ಯ ಇಲಾಖೆ ತೀರ್ಮಾನಿಸಿದೆ.
- ವಿದ್ಯುತ್ ಕೊರತೆ ನೀಗಿಸುವ ದಿಸೆಯಲ್ಲಿ ರಾಷ್ಟ್ರ ರಾಜಧಾನಿಯ ಬಳಿ ಶೀಘ್ರವೇ ಅಣು ವಿದ್ಯುತ್ ಸ್ಥಾವರ ವೊಂದು ತಲೆ ಎತ್ತಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ
- ಗೋರಖ್ ಪುರದಲ್ಲಿ ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ಉತ್ತರ ಭಾರತದಲ್ಲಿ ಇಂಥ ದೊಂದು ಯೋಜನೆ ತಲೆ ಎತ್ತಲಿರುವುದು ಇದೇ ಮೊದಲು.

- 2019ರ ಅರಣ್ಯ ಸ್ಥಿತಿಗತಿ ವರದಿ ಈ ವಿಷಯ ತಿಳಿಸಿದೆ. ಅದರ ಪ್ರಕಾರ ಅರಣ್ಯ ಪ್ರದೇಶ ಹೆಚ್ಚು ವಿಸ್ತರಣೆ ಕಂಡ ಮೊದಲ ಮೂರು ರಾಜ್ಯಗಳು ದಕ್ಷಿಣ ಭಾರತದ್ದೇ ಆಗಿದೆ.
- ರಾಜ್ಯದಲ್ಲಿ ಅರಣ್ಯಪ್ರದೇಶ ವಿಸ್ತರಿಸಿದೆ. 2017ರಿಂದ 19ರವರೆಗಿನ ಅವಧಿಯಲ್ಲಿ ರಾಜ್ಯದ ಅರಣ್ಯ ಪ್ರದೇಶವು 1,025 ಚದರ ಕಿ.ಮೀಗಳಷ್ಟು ಹೆಚ್ಚಿದೆ. ಅತಿ ಹೆಚ್ಚು ಅರಣ್ಯ ವಿಸ್ತರಣೆ ಕಂಡ ರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ.
- ಆಂಧ್ರಪ್ರದೇಶ (990 ಚ. ಕಿ.ಮೀ) ಹಾಗೂ ಕೇರಳ (823ಚ, ಕಿ,ಮೀ ) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ.
- ದಟ್ಟ ಅರಣ್ಯ 3.02%
- ಅರೆ ದಟ್ಟ ಅರಣ್ಯ 9.38%
- ದಟ್ಟವಲ್ಲದ ಅರಣ್ಯ 9.26%
- ಒಟ್ಟು 21.66%
- ಮಧ್ಯಪ್ರದೇಶ, ಅರುಣಾಚಲ ಪ್ರದೇಶ, ಛತ್ತೀಸ್‌ಗಢ, ಒಡಿಶಾ, ಮಹಾರಾಷ್ಟ್ರ,
- ಭಾರತದ ಒಟ್ಟು ಅರಣ್ಯ ಪ್ರದೇಶ
- 7,12,249 ಟಿ. (ವಿಸ್ತೀರ್ಣ ಚದರ ಕಿ.ಮೀನಲ್ಲಿ)
- 3,04,499 ದಟ್ಟವಲ್ಲದ ಅರಣ್ಯ
- 99,278 ದಟ್ಟ ಅರಣ್ಯ
- 3,08,472 ಅರೆ ದಟ್ಟ ಅರಣ್ಯ
- ಒಟ್ಟು ಅರಣ್ಯ ಪ್ರದೇಶ 38,575
- ದಟ್ಟ ಅರಣ್ಯ 4,501
- ಅರೆದಟ್ಟ ಅರಣ್ಯ 21,048
- ದಟ್ಟವಲ್ಲದ ಅರಣ್ಯ 13,026
- ಅರಣ್ಯ ಪ್ರದೇಶ ಹೆಚ್ಚಳ ಕರ್ನಾಟಕ 1,025 ಚ.ಕಿಮೀ
- ಆಂಧ್ರಪ್ರದೇಶ 900 ಚ.ಕಿ.ಮೀ
- ಕೇರಳ 823 ಚ.ಕಿ.ಮೀ ಮಾಡಲಾಗಿದೆ.
ಅಂತರ-ರಾಷ್ಟ್ರೀಯ
1. “ಅಂತಾರಾಷ್ಟ್ರೀಯ ಶಬ್ದ ವರ್ಷ”

- ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೆಸ್ಕೋ, ಶಬ್ದದ ಬಗ್ಗೆ ಹೊಸ ಆವಿಷ್ಕಾರ, ಸಂಶೋಧನೆ, ಜತೆಗೆ ಜನ ಸಾಮಾನ್ಯರಿಗೆ ವೈಜ್ಞಾನಿಕ ಮಾಹಿತಿ ತಲುಪಿಸಲು '2020' ಅನ್ನು ಅಂತಾರಾಷ್ಟ್ರೀಯ ಶಬ್ದದ ವರ್ಷವೆಂದು ಘೋಷಿಸಿದೆ.
- ಶಬ್ದ ಶಕ್ತಿ ವರ್ಗಾವಣೆ ವಾಹಕ, ಭೌತಶಾಸ್ತ್ರ, ರಾಸಾಯನ ಶಾಸ್ತ್ರ ಎಂಜಿನಿಯರಿಂಗ್, ವೈದ್ಯ ಕೀಯ, ಖಗೋಳಶಾಸ್ತ್ರದ ಅಧ್ಯಯನಗಳಲ್ಲಿ ಶಬ್ದ ಒಂದು ಪ್ರಮುಖ ವಿಷಯ.
- ಅತ್ಯಂತ ಲಯಬದ್ಧವಾಗಿ ಕೇಳುವ ಸಂಗೀತ ದೇಹ, ಮನಸ್ಸಿಗೆ ಸಂತಸ ಹಾಗೂ ಉಲ್ಲಾಸ ನೀಡುತ್ತದೆ. ಆದರೆ ಲಯ ಬದ್ಧತೆಯಿಲ್ಲದ ಶಬ್ದ ಅಹಿತಕರ. ಇತ್ತೀಚಿನ ದಿನಗಳಲ್ಲಿ ವಾಯು ಮಾಲಿನ್ಯ, ಜಲ ಮಾಲಿನ್ಯ ಜತೆಗೆ ಶಬ್ದ ಮಾಲಿನ್ಯ ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ.
- ವಾಹನಗಳ ಶಬ್ದ ವಿಮಾನ, ಜೆಟ್‌ಗಳ ಹಾರಾಟ, ಪಟಾಕಿ, ಡೈನಮೆಟ್‌ಗಳಿಂದ ಶಬ್ದ ಮಾಲಿನ್ಯ ಹೆಚ್ಚಾಗುತ್ತಿದೆ.
- ಇದರಿಂದ ಜನರ ಮಾನಸಿಕ ಸ್ವಾಸ್ಥವನ್ನು ಕಾಪಾಡಲು ಬೇಕಾದ ಚರ್ಚೆಗಳು ಈ ವರ್ಷ ನಡೆಯಲಿವೆ.
- ಶಬ್ದ ಮಾಲಿನ್ಯ ಜಾಗೃತಿ ಕಾರ್ಯಕ್ರಮ ಈ ವರ್ಷದಲ್ಲಿ ಹಮ್ಮಿಕೊಳ್ಳಲಾಗುವುದು. ಇತ್ತೀಚಿನ ಆವಿಷ್ಕಾರ ಡ್ರೋನ್‌ಗಳಲ್ಲಿ ಶಬ್ದದ ಮಟ್ಟವೂ ಹೆಚ್ಚಿದೆ. ಸೌಂಡ್ ಕಡಿಮೆ ಮಾಡುವ ಅಗತ್ಯ ಆವಿಷ್ಕಾರಗಳಿಗೆ ವಿಶೇಷ ಒತ್ತು ನೀಡಲಾಗುವುದು.
- ಜತೆಗೆ ಶಬ್ದವನ್ನೇ ಕೇಳದ ಕಿವುಡರಿಗೆ ವಿಶೇಷ ಯೋಜನೆ ಸಿದ್ದಪಡಿಸಲಾಗುತ್ತಿದೆ.ಶ್ರವಣ ಸಾಧನಗಳ ಅಂತರಾಷ್ಟ್ರೀಯ ಸಮಾವೇಶ ಅಮೇರಿಕದಲ್ಲಿ ನಡೆಯಲಿದೆ.
- ಸೂರ್ಯನ ಸುತ್ತ ಸುತ್ತುವ ಬಿಸಿ ಅನಿಲಗಳ ಬೃಹತ್ ರಾಶಿಯೇ ಇದೆ. ಸೂರ್ಯ ಗಂಟೆಗೆ 7,189 ಕಿಮೀ ವೇಗದಲ್ಲಿ ಸುತ್ತುವನು. ಈ ವೇಗದ ಸುತ್ತುವಿಕೆಯಿಂದ ಶಬ್ದ ಉತ್ಪತ್ತಿಯಾಗುತ್ತಿದೆ.
- ಇದನ್ನು ನಾಸಾ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಭೂಮಿ ಸೇರಿ ಇತರೆ ಗ್ರಹಗಳಲ್ಲಿ ಶಬ್ದ ಹೊರ ಹೊಮ್ಮುತ್ತಿದೆ. ಇದರ ಬಗ್ಗೆ ಆಸಕ್ತಿ ಕುತೂಹಲ ವಿಜ್ಞಾನಿಗಳಿಗಿದೆ.
- ಹೀಗೆ ಪ್ರತಿ ವರ್ಷ ಒಂದು ಘೋಷಣೆ ವಿಶ್ವ ಸಂಸ್ಥೆ ನೀಡುತ್ತಿದೆ. ಈ ಬಾರಿ ಶಬ್ದದ ಮಹತ್ವದ ಬಗ್ಗೆ ವಿಶೇಷ ಚರ್ಚೆ, ಉಪನ್ಯಾಸ, ಸಂಶೋಧನೆ, ವಿಜ್ಞಾನ ವನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯದಲ್ಲಿ ನಾನಾ ಸಂಸ್ಥೆಗಳು ಪಾಲ್ಗೊಳ್ಳಲಿವೆ.
- ರಾಜ್ಯದಲ್ಲಿ ಕರ್ನಾಟಕ ವಿಜ್ಞಾನ ಪರಿಷತ್ತು, ಭಾರತೀಯ ಜನ ವಿಜ್ಞಾನ ಸಂಸ್ಥೆ ವಿಜ್ಞಾನ ಕೇಂದ್ರಗಳು, ವೈಜ್ಞಾನಿಕ ಸಂಸ್ಥೆಗಳು ಇಡೀ ವರ್ಷ ಶಬ್ದದ ಬಗ್ಗೆ ಹಲವು ಕಾರ್ಯಕ್ರಮ ಆಯೋಜಿಸಲಿವೆ.
- ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ವಿಶ್ವಸಂಸ್ಥೆ ಪ್ರತಿ ವರ್ಷ ಒಂದೊಂದು ವಿಷಯ ಕುರಿತು ವರ್ಷಾಚರಣೆ ಘೋಷಿಸುತ್ತಿದೆ.
- 2015 ಬೆಳಕಿನ ವರ್ಷ, 2016 ಧಾನ್ಯಗಳ ವರ್ಷ, 2017 ಸುಸ್ಥಿರ ಅಭಿವೃದ್ಧಿ ಪ್ರವಾಸೋದ್ಯಮ, 2018 ಯಾವುದೇ ಘೋಷಣೆ ಇಲ್ಲದ ವರ್ಷವಾಗಿತ್ತು. 2019 ಆವರ್ತಕ ಕೋಷ್ಟಕ ವರ್ಷವಾಗಿತ್ತು.
ವಿಜ್ಞಾನ
1. ಮೆಸೊಯಿಕ್ ಯುಗದ ನೊಣ ಪತ್ತೆ:
- ನೊಣದ ಪಳೆಯುಳಿಕೆಯನ್ನು ಬುಸ್ಸಿನ್ಯಾಟೊರ್ಮೈ ಗಂಗ್ನಮಿ ಎಂದು ಕರೆಯಲಾಗಿದೆ. ಪಳೆಯುಳಿಕೆ ಕೀಟವೂ ನೋಡಲು ಆಧುನಿಕ ಕಾಲದ ಕಣಜದ ಮಾದರಿಯಲ್ಲಿದೆ.
- ಬೆನ್ನಿನ ಭಾಗದಲ್ಲಿ ಕಪ್ಪು ಮತ್ತು ಹಳದಿ ಹೊದಿಕೆ ಇದ್ದು, ಸಾಮಾನ್ಯ ಮನೆಯ ನೊಣಕ್ಕಿಂತಲೂ ಎರಡು ಪಟ್ಟು ದೊಡ್ಡದಾಗಿದೆ. ಕೀಟದ ತೋಳುಗಳು ವಿಶಿಷ್ಟವಾಗಿ ತಿರುಚಿದಂತಿದೆ.
- ಇದು ಸಂಪೂರ್ಣ ಅಳಿದು ಹೋಗಿರುವ ಝಂಗ್ಸೊಲ್ವಡಿಯಾ ಕುಟುಂಬಕ್ಕೆ ಸೇರಿದ್ದು ಎನ್ನಲಾಗಿದೆ.
- ಅಂದಾಜು 250 ರಿಂದ 65 ಮಿಲಿಯನ್ ವರ್ಷಗಳ ಹಿಂದಿನ ಮೆಸೊಜೊಯಿಕ್ ಯುಗದಲ್ಲಿ ಈ ಕೀಟ ಜೀವಿಸತ್ತು ಎಂದು ಮಾಸ್ಕೋದಲ್ಲಿರುವ ಬೊಇಸ್ಸಿ ಯಾಕ್ ಪ್ಯಾಲಿಯಂಟಾಲಜಿಕಲ್ ಇನ್ ಸ್ಟಿಟ್ಯೂಟ್ ನ ಹಿರಿಯ ಸಂಸೋದಕ ರಾದ ಅಲೆಕ್ಸಾಂಡರ್ ಖ್ರಮೋವ್ ತಿಳಿಸಿದ್ದಾರೆ.
ಕ್ರೀಡೆ
1. 2022ರ ಬರ್ಮಿಂಗ್‌ಹ್ಯಾಂ ಗೇಮ್ಸ್ ಗೆ ಬಹಿಸ್ಕಾರವಿಲ್ಲ:
- ಶೂಟಿಂಗ್ ಕ್ರೀಡೆಯನ್ನು 2022ರ ಬರ್ಮಿಂಗ್‌ಹ್ಯಾಂ ಕಾಮನ್ವೆಲ್ ಗೇಮ್ಸ್ ನಿಂದ ಕೈಬಿಟ್ಟಿದ್ದ ವಿಚಾರಕ್ಕಾಗಿ ಗೇಮ್ಸ್ಅನ್ನು ಬಹಿಷ್ಕರಿಸಲು ಮುಂದಾಗಿದ್ದ ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಈಗ ತನ್ನ ನಿರ್ಧಾರವನ್ನು ಹಿಂಪಡೆದಿದೆ.
- ಅದಲ್ಲದೆ, 2026 ಅಥವಾ 2030ರ ಕಾಮನ್ವೆಲ್ತ್ ಗೇಮ್ಸ್ ಗೆ ಬಿಡ್ ಸಲ್ಲಿಸುವ ನಿರ್ಧಾರವನ್ನೂ ಮಾಡಿದೆ.
- 2010ರಲ್ಲಿ ದೆಹಲಿಯಲ್ಲಿ ಗೇಮ್ಸ್ ಆಯೋಜನೆ ಮಾಡಿದ್ದ ಭಾರತ, ಈಗ 2026 ಹಾಗೂ 2030ರ ಗೇಮ್‌ಗೆ ಬಿಡ್ ಮಾಡಲಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರದ ಅನುಮತಿಯನ್ನು ಕೇಳಲಿದೆ.
- ಬರ್ಮಿಂಗ್ ಹ್ಯಾಂ ಗೇಮ್ಸ್ನಲ್ಲಿ ಶೂಟಿಂಗ್ ಕ್ರೀಡೆಯನ್ನು ಕೈಬಿಟ್ಟ ಕಾರಣಕ್ಕಾಗಿ ಇದನ್ನು ಸರಿದೂಗಿಸುವ ಸಲುವಾಗಿ ಸಿಜಿಎಫ್, ಭಾರತಕ್ಕೆ ಕಾಮನ್ವೆಲ್ತ್ ಶೂಟಿಂಗ್ ಚಾಂಪಿಯನ್‌ಷಿಪ್ ಆತಿಥ್ಯದ ಭರವಸೆ ನೀಡಿತ್ತು.
- ರಾಷ್ಟ್ರೀಯ ರೈಫಲ್ ಸಂಸ್ಥೆ (ಎನ್‌ಆರ್‌ಎಐ) ಶಿಫಾರಸಿಗೆ ಐಒಎ ಒಪ್ಪಿಗೆ ನೀಡಿದೆ. ಬರ್ಮಿಂಗ್‌ಹ್ಯಾಂ ಗೇಮ್ಸ್ಗೂ ಮುನ್ನ 2020ರ ಮಾರ್ಚ್‌ನಲ್ಲಿ ಕಾಮನ್ವೆಲ್ತ್ ಶೂಟಿಂಗ್ ಚಾಂಪಿಯನ್‌ಷಿಪ್ ಭಾರತದಲ್ಲಿ ನಡೆಯಲಿದ್ದು, ಇದಕ್ಕೆ ಕಾಮನ್ವೆಲ್ತ್ ಗೇಮ್ಸ್ ಪದಕದ ಮಾನ್ಯತೆ ಇರಲಿದೆ.
- ಐಒಎ ಈ ಶಿಫಾರಸನ್ನು ಸಿಜಿಎಫ್‌ನ ವ್ಯವಸ್ಥಾಪಕ ಸಮಿತಿಯ ಮುಂದೆ ಇಡಲಿದ್ದು, ಇದಕ್ಕೆ ಒಪ್ಪಿಗೆ ಪಡೆದುಕೊಳ್ಳಬೇಕಿದೆ.
0 Comments