🎤ವಾಯ್ಸ್ ಆಫ್ ಮದೀನಾ💚
ಮದ್ಹ್ ಹಾಡುಗಳ ಸ್ಪರ್ಧೆ-2019
ಮಗದೊಮ್ಮೆ ನಮ್ಮ ಮುಂದೆ ಪುಣ್ಯ ರಬೀಹ್ ಆಗಮನವಾಗುತ್ತಿದೆ.. ಈ ಸುಸಂದರ್ಭದಲ್ಲಿ, ಈ ವರ್ಷದ ಮಿಲಾದ್ ಆಚರಣೆಯನ್ನು ಇನ್ನಷ್ಟು ಮಧ್ಹ್ ಹಾಡುಗಳ ಮೂಲಕ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ WAY To MADEENA WHATSAPP GROUP, NOOR-UL-FALAH ISLAMIC STORE,ISHAL VARIGAL ಸಹಯೋಗದೊಂದಿಗೆ ಒಂದು ಮಧ್ಹ್ ಕಾಂಪಿಟೇಶನ್ ಏರ್ಪಡಿಸಿದ್ದೇವೆ..
ಸ್ಪರ್ಧೆಯ ನಿಯಮಗಳು ಮತ್ತು ಕೆಲವು ಮಾಹಿತಿಗಳು 👇🏻
🎤ನೀವು ಕಳುಹಿಸುವ ಹಾಡುಗಳು ಹೊಚ್ಚಹೊಸದಾಗಿರಬೇಕು (ಈ ಮೊದಲೇ ಹಾಡಿ ಶೇರ್ ಮಾಡಿರುವ ಹಾಡುಗಳನ್ನು ಸ್ವೀಕರಿಸುವುದಿಲ್ಲ..)
♦ಹಾಡುಗಳು ಸಂಗೀತ ರಹಿತವಾಗಿರತಕ್ಕದ್ದು(ದಪ್ಫ್ ಟ್ಯೂನ್ ಬಳಸಬಹುದು)
♦ಕನ್ನಡ ಹಾಗೂ ಮಲಯಾಳಂ ಮದ್ಹ್ ಗೀತೆಗಳಿಗೆ ಮಾತ್ರ ಅವಕಾಶ
♦ನಿಮ್ಮ ಹಾಡುಗಳು ಸ್ವಚ್ಛ ಹಾಗೂ (ಕನ್ನಡ ಅಥವಾ ಮಲಯಾಳಂ ಭಾಷ ಉಚ್ಚಾರಣೆ) ಶುದ್ಧವಾಗಿರಬೇಕು
♦ಒಬ್ಬರಿಗೆ ಒಂದು ಗೀತೆ ಕಳುಹಿಸಲು ಮಾತ್ರ ಅವಕಾಶ ನೀಡಲಾಗುವುದು(ಒರ್ವ ಕನ್ನಡ ಹಾಗೂ ಮಲಯಾಳಂ ಎರಡು ಗೀತೆಗಳನ್ನು ಬೇರೆ ಬೇರೆಯಾಗಿ ಹಾಡಿ ಕಳುಹಿಸಿದರೆ ಎರಡನ್ನು ಸ್ವೀಕರಿಸಲಾಗುವುದು)
♦ಹಾಡುಗಾರರಿಗೆ ವಯಸ್ಸಿನ ವಯೋಮಿತಿ ಇರುವುದಿಲ್ಲ..
ಕೆಲವು ಮಾಹಿತಿಗಳು 👇🏻
1)ನೀವು ಕಳಿಸುವ ಮದ್ಹ್ ಹಾಡುಗಳು ಹಬೀಬರ ಮದ್ಹ್ ಹಾಡು ಆದರೆ ಉತ್ತಮ..ಇದು ಪುಣ್ಯ ರಬೀಹ್ ಅಲ್ಲವೇ !!!
2) ನೀವು ಕಳಿಸುವ ಹಾಡುಗಳು ಆಡಿಯೋ ಅಥವಾ ವೀಡಿಯೋ ಯಾವುದು ಆಗಬಹುದು. ಆಡಿಯೋ ಫೈಲ್ ಕಳುಹಿಸಿದರೆ ಆಡ್ಮಿನ್ ಬಳಗ ವೀಡಿಯೋ ಮಾಡಿ ಅಪ್ಲೋಡ್ ಮಾಡುವರು..
3). ಹಾಡುಗಳನ್ನು ಸ್ಟೂಡಿಯೋದಲ್ಲಿಯೇ ಹಾಡತಕ್ಕದ್ದು..(ಮೊಬೈಲ್ ಅಥವಾ ಇತರ ಆಪ್ ಮೂಲಕ ಹಾಡಿದ ಹಾಡುಗಳನ್ನು ಸ್ವೀಕರಿಸುವುದಿಲ್ಲ).. ದಫ್ಫ್ ಬೀಟ್ಸ್ / ರಿದಂ ನೊಂದಿಗೆ ಇದ್ದರೂ ಇಲ್ಲದಿದ್ದರೂ ಪರವಾಗಿಲ್ಲ. ವಾಯ್ಸ್ ಕ್ಲ್ಯಾರಿಟೀ ಬಹು ಮುಖ್ಯ..
4). ನಿಮಗೆ ಯಾವ ಮಧ್ಹ್ ಹಾಡನ್ನು ಬೇಕಾದರೂ ಆಯ್ಕೆ ಮಾಡಬಹುದು. ಆದರೆ, ಅದು ಕನ್ನಡ ಅಥವಾ ಮಲಯಾಳಂ ಆಗಿರಬೇಕು..
5). ಹಾಡಿದ ಆಡಿಯೋ ಅಥವಾ ವಿಡಿಯೋ ಫೈಲ್ ಅನ್ನು ನಮ್ಮ ಅಡ್ಮಿನ್ ಬಳಗದವರಿಗೆ ಪರ್ಸನಲ್ ಕಳುಹಿಸತಕ್ಕದ್ದು..
6). ನಮಗೆ ಕಳುಹಿಸಿದ ಹಾಡುಗಳನ್ನು ನಮ್ಮ ಸ್ಪರ್ಧೆ ಮುಗಿಯುವವರೆಗೂ ಯಾರಿಗೂ ಶೇರ್ ಮಾಡುವಂತಿಲ್ಲ..
7). ನವೆಂಬರ್ ೮ ರ ಒಳಗಾಗಿ ನಮಗೆ ಹಾಡನ್ನು ಕಳುಹಿಸಿ..
ವಿ.ಸೂ 🚫
ವಾಯ್ಸ್ ಆಫ್ ಮದೀನಾ ಸ್ಪರ್ಧೆ ಪ್ರಯುಕ್ತ ಗ್ಲಾಡ್ ಸ್ಟುಡಿಯೊ ಬಿ.ಸಿ ರೋಡ್ ವತಿಯಿಂದ ಅತಿ ಕಡಿಮೆ ದರದಲ್ಲಿ ಹಾಡುಗಳ ರೆಕಾರ್ಡಿಂಗ್ ಮಾಡಿಕೊಡಲಿದ್ದಾರೆ.. ಆಸಕ್ತರು ಅದರ ಸದುಪಯೋಗ ಪಡಿಸಿಕೊಳ್ಳಿ..
ಭಾಗವಹಿಸುವವರ ಗಮನಕ್ಕೆ :
ಪ್ರಶಸ್ತಿ ಆಯ್ಕೆ ಹೇಗೆ: 🏆
ನೀವು ಕಳುಹಿಸಿದ ಎಲ್ಲಾ ಹಾಡುಗಳನ್ನು ಖ್ಯಾತ ಮದ್ಹ್ ಹಾಡುಗಾರರ ತಂಡದಿಂದ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನಕ್ಕೆ ಆಯ್ಕೆ ಮಾಡಲಾಗುವುದು.. (ಮತ್ತು ರಬೀವಲ್ ಅವ್ವಲ್ ಹನ್ನೆರಡು) (ನವೆಂಬರ್ ಹತ್ತರಂದು) ನಮ್ಮ ಯೂಟ್ಯೂಬ್ ಚಾನೆಲ್'ನಲ್ಲಿ ಅಪ್ಲೋಡ್ ಮಾಡಲಾಗುವುದು.. ನೀವು ಕಳುಹಿಸಿದ ಹಾಡುಗಳನ್ನು ನಮ್ಮ ಸ್ಪರ್ಧೆ ಮುಗಿಯುವವರೆಗೂ ಹೊರಗೆ ಎಲ್ಲೂ ಶೇರ್ ಮಾಡುವಂತಿಲ್ಲ..
ನಮ್ಮ ಯೂ ಟ್ಯೂಬ್ ಚಾನೆಲ್
ಮದ್ಹ್ ಹಾಡುಗಳ ಭಂಡಾರ
Ishal Varigal YouTube Channel
https://www.youtube.com/ishalvarigal
ಇನ್ನಷ್ಟು ಮಾಹಿತಿಗಾಗಿ ಪ್ರಯೋಜಕರನ್ನು ಸಂಪರ್ಕಿಸಿ..
ವಾಯ್ಸ್ ಆಫ್ ಮದೀನಾ 💚
Join Group Now --> : Click to Join the Group
0 Comments