ಈ ಹಾಡಿನ ಧಾಟಿಗಾಗಿ ಮೇಲಿನ ವೀಡಿಯೋ ಪ್ಲೇ ಮಾಡಿ 

ತ್ವಾಲ ಅಲ್ ಬದುರು ಅಲೈನ
ತ್ವಾಲ ಅಲ್ ಬದುರು ಅಲೈನ
ತ್ವಾಲ ಅಲ್ ಬದುರು ಅಲೈನ
ಮಿನ್ ಸಾನಿ ಆತಿಲ್ ವದಾ ಈ
ವಾಜಬ ಶುಕುರು ಅಲೈನಾ ಮಾ  ದಅ ಲಿಲ್ಲಾಹಿ ದಾ

ಆ ಕ್ರೂರ ಅರಬರ ಕೇಡು
ಉಪಟಳವು ಮಿತಿಮೀರಿತ್ತು
ತಾಯ್ನೇಲದಿ ಜೀವನವಂದು
ಹಿಂಸೆಯ ಗೂಡಾಗಿತ್ತು

ಅನಿವಾರ್ಯ ನೆಬಿಯರು ಅಂದು ಮಕ್ಕ ತ್ಯಜಿಸಿದರು
ಪುಣ್ಯ ಮದೀನದತ್ತ ಪಯಣ ಸಾಗಿದರು (ತ್ವಾಲ ಅಲ್)


ಆ ಶಿರವ ಛೇದಿಸಲೆಂದು
ಕಾದಿತ್ತು ದುಷ್ಟರ ಕೂಟ
ಗುರಿ ಮುಟ್ಟುವ ತವಕ್ಕದಿಂದ
ಶುರು ವಿತ್ತರು ಅರಬರು ಓಟ
ಅಲ್ಲಾಹನೇ ಇಚ್ಛೆಯಂತೆ ರಕ್ಷೆ ಪಡೆದಿಹರು
ಕಾಟಾಳರ ಕಣ್ಣ ಮುಂದೆ ಶಾಗ ಹಾಕಿದರು (ತ್ವಾಲ ಅಲ್)

ಮಕ್ಕದಿಂದ ಮದೀನಾ ಕಡೆಗೆ
ಹೊರಟಾಗ ಹಿಜಿರ ಯಾತ್ರೆ
ನವ ಶಾಗೆಯ ಉದಯ ವಾಯ್ತು
ಆ ಮಣ್ಣು ಪುಳಕ ವಾಯ್ತು

ಪುಣ್ಯ ಮದೀನಾ ವಂದು ಹರ್ಷ ಗೊಂಡಿದರು
ಸಾಗತ್ತವ ಗೋರಿ ಮನವು ದಾನ್ಯ ವಾಗಿದವು (ತ್ವಾಲ ಅಲ್)