ಅಲ್ಲಾಹ್ ಅಲ್ಲಾಹ್ ನೀನೇ ಎಲ್ಲಾ
ನಿನಲ್ಲಾದೆ ಬೇರೆ ಯಾರಿಲ್ಲ
ಬಾಗುವೆ ಶಿರವನ್ನು ಜಲ್ಲಾ
ಜಗಪ್ರಭು ನೀನೇ ಓ ಅಲ್ಲಾಹ್

ಹಸ್ತವ ನಿನ್ನತ್ತ ತೋರಿ
ನಯನವ ನಿನ್ನತ್ತ ಬೀರಿ
ನಡೆಯೆನಾ ನಿನ್ನನ್ನು ಮೀರಿ
ತೋರು ನೀ ಸನ್ಮಾರ್ಗ ದಾರಿ

ಇಹದಲ್ಲಿ ಶಾಂತಿಯಾ ನೆಲೆಸು
ಪರದಲ್ಲಿ ಮೋಕ್ಷಾವ ಕರುಣಿಸು
ಮಹ್ಶರ ಮೈದಾನದಲ್ಲಿ
ಕಾಪಾಡು ನನ್ನ ಪರದಲ್ಲಿ

ಪೈಗಂಬರ ಅನುಯಾಯಿಯಾಗಿ
ಇಸ್ಲಾಮಿನ ಸೇನಾನಿಯಾಗಿ
ಮಾಡೆಮ್ಮನು ನೀ ಮುಅಮಿನಾಗಿ
ಆಮೀನ್ ಯಾ ರಬ್ಬಲ್ ಅಲಾಮಿನ್